Loader..
BEWARE OF FRAUDSTERS: WE HAVE NOT INVITED ANY REQUESTS FOR DEALERSHIP/FRANCHISE. DO NOT TRUST ANYONE OFFERING SUCH A FACILITY AND SEEKING MONEY IN IFFCO’S NAME.
Start Talking
Listening voice...
IFFCO kick starts one of India’s largest nationwide tree plantation campaign IFFCO kick starts one of India’s largest nationwide tree plantation campaign

ಪತ್ರಿಕಾ ಬಿಡುಗಡೆಗಳು

ರಸಗೊಬ್ಬರ ವಲಯದಲ್ಲಿ ಡ್ರೋನ್‌ಗಳ ಬಳಕೆಯನ್ನು ಹೆಚ್ಚಿಸಲು IFFCO FMDI “ಗ್ರೀನ್ ಪೈಲಟ್‌ಗಳ” ಮೊದಲ ಬ್ಯಾಚ್‌ಗೆ ತರಬೇತಿ ನೀಡುತ್ತದೆ

  • 2021 ರ ನವೆಂಬರ್ 28 ರಿಂದ ಡಿಸೆಂಬರ್ 8 ರವರೆಗೆ ರೈತರಿಗೆ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್‌ಗಳ ಬಳಕೆಯನ್ನು ತರಬೇತಿ ನೀಡಲು ಹತ್ತು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
  • ಗುರುಗ್ರಾಮ್‌ನ IFFCO ಯ ರಸಗೊಬ್ಬರ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯಲ್ಲಿ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್‌ನ 36 ಜನ ಭಾಗವಹಿಸಿದರು ಮತ್ತು ತರಬೇತಿ ಪಡೆದರು.

ಹೊಸದಿಲ್ಲಿ, 9 ಡಿಸೆಂಬರ್, 2021: ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ (IFFCO) WOW ಗೋ ಗ್ರೀನ್ ಸಹಯೋಗದೊಂದಿಗೆ 2021 ರ ನವೆಂಬರ್ 28 ರಿಂದ ಡಿಸೆಂಬರ್ 8 ರವರೆಗೆ ಕೃಷಿ ಡ್ರೋನ್‌ಗಳ ಬಳಕೆಯ ಕುರಿತು ಹತ್ತು ದಿನಗಳ ಕಾರ್ಯಾಗಾರವನ್ನು ಆಯೋಜಿಸಿಲಾಗಿತ್ತು.ಈ ಕಾರ್ಯಾಗಾರವನ್ನು ಫರ್ಟಿಲೈಸರ ಮ್ಯಾನೇಜಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (ಎಫ್‌ಎಂಡಿಐ), ಗುರುಗ್ರಾಮ್ ಆಯೋಜಿಸಿದ್ದು, ಇದು 1982 ರಲ್ಲಿ ಸ್ಥಾಪನೆಯಾದ ಪ್ರಮುಖ ಸಂಸ್ಥೆಯಾಗಿದೆ, ಇದು ರಾಷ್ಟ್ರ ಮತ್ತು ವಿದೇಶಗಳಿಂದ ಆಧುನಿಕ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಪ್ರಗತಿಪರ ರೈತರಿಗೆ ತರಬೇತಿ ನೀಡಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಪ್ರಗತಿಪರ ರೈತರು, ಉದ್ಯಮಿಗಳು, ಎಫ್‌ಪಿಒಗಳು, ಸಹಕಾರಿ ಸಂಸ್ಥೆಗಳು ಸೇರಿದಂತೆ ಒಟ್ಟು 36 ಜನ, ದೆಹಲಿ (1), ಹರಿಯಾಣ (15), ಉತ್ತರ ಪ್ರದೇಶ (11) ಮತ್ತು ಗುಜರಾತ್ (9) ರಾಜ್ಯಗಳಿಂದ ಭಾಗವಹಿಸಿದ್ದರು ಮತ್ತು ತರಬೇತಿ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

 

ಕಾರ್ಯಕ್ರಮವನ್ನು ವರ್ಚುವಲ್ ಮೋಡ್ ಮೂಲಕ IFFCO ದ ವ್ಯವಸ್ಥಾಪಕ ನಿರ್ದೇಶಕ ಡಾ. ಯುಎಸ್ ಅವಸ್ತಿ ಉದ್ಘಾಟಿಸಿದರು. ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಡ್ರೋನ್ ಬಳಕೆಯಿಂದ ರೈತರಿಗೆ ವೆಚ್ಚ ಕಡಿಮೆಯಾಗುವುದಲ್ಲದೆ ಉತ್ಪಾದನೆಯೂ ಹೆಚ್ಚುತ್ತದೆ ಹೀಗಾಗಿ ಈ ತರಬೇತಿ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎ೦ದು ಹೇಳಿದರು.. IFFCO ಮಾರುಕಟ್ಟೆ ನಿರ್ದೇಶಕ ಯೋಗೇಂದ್ರ ಕುಮಾರ್ ಅವರು ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಈ ಕಾರ್ಯಕ್ರಮವು ಕೃಷಿ ಅಭಿವೃದ್ಧಿಗೆ ಹೊಸ ಮಾರ್ಗವನ್ನು ಒದಗಿಸುತ್ತದೆ ಎಂದು ಹೇಳಿದರು.

ಈ 10 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಮಗ್ರ ತರಗತಿ ಕೊಠಡಿ ಹಾಗೂ ಕೃಷಿಯಲ್ಲಿ ಡ್ರೋನ್‌ಗಳ ಬಳಕೆ, ಅದರ ಕಾರ್ಯಾಚರಣೆ ಮತ್ತು ನಿರ್ವಹಣೆ ಮುಂತಾದ ಡ್ರೋನ್‌ಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು. ಈ ತರಬೇತಿಯ ಕಾರ್ಯಕ್ರಮದಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ವಿಷಯಗಳು:

  • ಡ್ರೋನ್‌ಗಳ ಪರಿಚಯ, ಇತಿಹಾಸ, ಪ್ರಕಾರಗಳು, ಅಪ್ಲಿಕೇಶನ್‌ಗಳು ಮತ್ತು ಭವಿಷ್ಯದ ನಿರೀಕ್ಷೆಗಳು.
  • DGCA ನಿಯಂತ್ರಣ, ನಾಗರಿಕ ವಿಮಾನಯಾನ
  • ವಿಮಾನಗಳ ಮೂಲ ತತ್ವ
  • ಡ್ರೋನ್ ರಹಿತ ವಲಯಗಳ ಜ್ಞಾನದೊಂದಿಗೆ ವಾಯುಪ್ರದೇಶದ ರಚನೆ ಮತ್ತು ವಾಯುಪ್ರದೇಶದ ನಿರ್ಬಂಧ
  • ವಿಮಾನ ಯೋಜನೆ
  • ಘರ್ಷಣೆ ತಪ್ಪಿಸುವಿಕೆ ರೇಡಿಯೋ ಟೆಲಿಫೋನಿ (RT) ತಂತ್ರಗಳು ಪ್ರಮಾಣಿತ ರೇಡಿಯೋ ಪರಿಭಾಷೆ,
  • ಪೇಲೋಡ್ ಅಳವಡಿಕೆ, ಮತ್ತು ಬಳಕೆ ಇತ್ಯಾದಿ.
  • ಎಲೆಕ್ಟ್ರಾನಿಕ್ ವೇಗ ನಿಯಂತ್ರಕ, ವಿಮಾನ ನಿಯಂತ್ರಕಗಳು
  • ಡ್ರೋನ್‌ಗಳ ಕಾರ್ಯಾಚರಣೆ ಮತ್ತು ಅಪ್ಲಿಕೇಶನ್ ಇತ್ಯಾದಿ.

ತರಬೇತಿಯು ಉತ್ತೇಜಕಗಳೊಂದಿಗೆ ಕ್ರಮೇಣ ಸಣ್ಣ ಡ್ರೋನ್‌ಗಳಿಂದ ಅಂತಿಮವಾಗಿ ಪೂರ್ಣ ಗಾತ್ರದ ಕೃಷಿ ಡ್ರೋನ್‌ಗಳಿಗೆ ಚಲಿಸುವ ಮೂಲಕ ಪ್ರಾರಂಭವಾಯಿತು. ಈ ಮೊದಲು ಡ್ರೋನ್ ಅನ್ನು ಸ್ಪರ್ಶಿಸದ ಈ ಎಲ್ಲಾ ತರಬೇತಿ ಹೊಂದುವವರು, ತರಬೇತಿಯ ಕೆಲವೇ ದಿನಗಳಲ್ಲಿ, ಅವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾರಿಸಲು ಪ್ರಾರಂಭಿಸಿದರು. ಅಗ್ರಿ-ಡ್ರೋನ್‌ಗಳ ಬಳಕೆಯೊಂದಿಗೆ ಯಶಸ್ವಿಯಾಗಿ ತರಬೇತಿ ಪಡೆದ ಭಾಗವಹಿಸಿದ ಅಭ್ಯರ್ಥಿಗಳನ್ನು “ಗ್ರೀನ್ ಪೈಲಟ್‌ಗಳು” ಎಂದು ಕರೆಯಲಾಯಿತು. ಈ ಹಸಿರು ಪೈಲಟ್‌ಗಳು ಈ ತಂತ್ರಜ್ಞಾನವನ್ನು ತಮ್ಮ ಭೂಮಿಯಲ್ಲಿ ಬಳಸುವುದಲ್ಲದೆ, ಜಾಗೃತಿ ಮೂಡಿಸಲು ಮತ್ತು ಆಯಾ ಪ್ರದೇಶದ ಇತರ ರೈತರೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಪ್ರತಿಜ್ಞೆ ಮಾಡಿದರು.

ಕೃಷಿ ಡ್ರೋನ್‌ಗಳ ಬಳಕೆಯ ಕುರಿತು ನೀತಿಯನ್ನು ತರಲು ಸರ್ಕಾರ ಯೋಜಿಸುತ್ತಿದ್ದು, ರೈತರಿಗೆ ಈ ತಂತ್ರಜ್ಞಾನದ ಬಳಕೆಯಲ್ಲಿ ತರಬೇತಿ ನೀಡುವುದು ಅತ್ಯಂತ ಮಹತ್ವದ್ದಾಗಿದೆ, ಆದ್ದರಿಂದ ಅಧಿಕೃತ ನೀತಿಯನ್ನು ಘೋಷಿಸಿದ ತಕ್ಷಣ ಈ ತಂತ್ರಜ್ಞಾನವನ್ನು ಸ್ವೀಕರಿಸಲಾಗುತ್ತದೆ. ಅಗ್ರಿ-ಡ್ರೋನ್‌ನ 15 ನಿಮಿಷಗಳ ಹಾರಾಟವು 2.5 ಎಕರೆ ಪ್ರದೇಶದಲ್ಲಿ ಗೊಬ್ಬರವನ್ನು ಸಿಂಪಡಿಸಬಹುದು. 2025 ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ಯೋಜನೆಯನ್ನು ಪೂರೈಸುವ ಸಲುವಾಗಿ ರಸಗೊಬ್ಬರದ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಆತ್ಮನಿರ್ಭರ್ ಕೃಷಿ ಮತ್ತು ಆತ್ಮನಿರ್ಭರ್ ಭಾರತ್ ಯೋಜನೆಯ IFFCO ಒಂದು ಹೆಜ್ಜೆ ಮುಂದಿದೆ. IFFCO ತರಬೇತಿ ನೀಡುವ ಈ ಹೆಜ್ಜೆಯು ಭಾರತವನ್ನು ಆಧುನಿಕ ಕೃಷಿಯ ದಿಕ್ಕಿನಲ್ಲಿ ಮುನ್ನಡೆಸುವ ಪ್ರವರ್ತಕರನ್ನಾಗಿ ಮಾಡುತ್ತದೆ.

ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ, ಕೃಷಿ ಸಚಿವಾಲಯ (ರಸಗೊಬ್ಬರ ಇಲಾಖೆ) ಸಚಿನ್ ಕುಮಾರ್ - ಅವರು FMDI ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಸಿರು ಪೈಲಟ್‌ಗಳನ್ನು ಉದ್ದೇಶಿಸಿ ಮಾತನಾಡುತ್ತಾ,IFFCO ಯ ಈ ಪ್ರಯತ್ನಗಳನ್ನು ಶ್ಲಾಘಿಸಿದರು.

ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ IFFCO ದ ,JMD ಯಾದ ರಾಕೇಶ್ ಕಪೂರ್ ಮಾತನಾಡಿ, ಉದ್ಯಮಿಗಳಿಗಾಗಿ IFFCO ಮತ್ತು ವಾವ್ ಸಿದ್ಧಪಡಿಸಿದ ವ್ಯವಹಾರ ಮಾದರಿಯು ಸಾಧಿಸಬಹುದಾದ ಮಾದರಿಯಾಗಿದೆ ಮತ್ತು ಯಶಸ್ಸಿನ ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಈ ಸಂದರ್ಭದಲ್ಲಿ IFFCO ದ ಮಾರುಕಟ್ಟೆ ನಿರ್ದೇಶಕ ಯೋಗೇಂದ್ರ ಕುಮಾರ್ ಅವರು ಎಲ್ಲಾ ಹಸಿರು ಪೈಲಟ್‌ಗಳಿಗೆ ಡ್ರೋನ್‌ಗಳನ್ನು ವ್ಯಾಪಾರವಾಗಿ ನೋಡದೆ ರೈತರ ಸೇವೆ ಮಾಡುವ ಉದ್ದೇಶದಿಂದ ಬಳಸಬೇಕೆಂದು ಮನವಿ ಮಾಡಿದರು.

IFFCO ನ FMDI ಸಾವಿರಾರು ರೈತರು ಮತ್ತು ಕೃಷಿ ಉತ್ಸಾಹಿಗಳಿಗೆ ಕೃಷಿಯ ವಿವಿಧ ಅಂಶಗಳಲ್ಲಿ ತರಬೇತಿ ನೀಡುತ್ತದೆ. ಇದು ನೂರಾರು ಪ್ರಶಿಕ್ಷಣಾರ್ಥಿಗಳಿಗೆ ವಸತಿ ಸೌಲಭ್ಯಗಳನ್ನು ಹೊಂದಿರುವ ಇಂತಹ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ. IFFCO ಮತ್ತು ICAR ನಂತಹ ಇತರ ಪ್ರಮುಖ ಸಂಸ್ಥೆಗಳ ತಜ್ಞರು ಮತ್ತು ವಿಜ್ಞಾನಿಗಳು ಇದನ್ನು ನಿಯಮಿತವಾಗಿ ಭೇಟಿ ಮಾಡುತ್ತಿರುತ್ತಾರೆ. FMDI ರಾಷ್ಟ್ರದ ವಿಶಾಲವಾದ ಕೃಷಿ ಭ್ರಾತೃತ್ವಕ್ಕೆ ಸೇವೆ ಸಲ್ಲಿಸಲು IFFCO ಗೆ ಮಾರ್ಗವಲ್ಲ ಆದರೆ IFFCO ಕೇವಲ ವ್ಯಾಪಾರವಲ್ಲ ಇದು ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರವಿರುವ ವ್ಯಾಪಾರವಾಗಿದೆ