
ನಗರ ತೋಟಗಾರಿಕೆ ಉತ್ಸಾಹಿಗಳಲ್ಲಿ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಇಚ್ಛೆಹೊಂದಿದೆ.
ಹೊಸದಿಲ್ಲಿ, ಜೂನ್ 2020: ಅಕ್ವಾಜಿಟಿ, IFFCO - ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್‌ನ ಸಹವರ್ತಿಯಲ್ಲಿ, ವಿಶ್ವದ ಅತಿದೊಡ್ಡ ಸಹಕಾರಿ ನಗರ ತೋಟಗಾರಿಕೆ IFFCO ಅರ್ಬನ್ ಗಾರ್ಡನ್ಸ್ ಎಂಬ ಬ್ರಾಂಡ್ ಹೆಸರಿನಲ್ಲಿ,ವಿಶೇಷವಾದ ನಗರ ತೋಟಗಾರಿಕಾ ಉತ್ಪನ್ನ ಶ್ರೇಣಿಯನ್ನು ಪರಿಚಯಿಸುವ ಮೂಲಕ ಉಪಯುಕ್ತ, ಪರಿಣಾಮಕಾರಿ ಮತ್ತು ಬಳಸಲು ಸುಲಭವಾದ ಉತ್ಪನ್ನಗಳೊಂದಿಗೆ ನಗರ ಉತ್ಸಾಹಿಗಳಿಗೆ ಸಹಾಯ ಮಾಡಲು ಮುಂದಾಗಿದೆ.
ಆಕ್ವಾಗ್ರಿ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಈ ಉತ್ಪನ್ನಗಳನ್ನು, ತಮಿಳುನಾಡಿನ ಮನಮದುರೈನಲ್ಲಿರುವ ಅವರ ಸುಧಾರಿತ R&D ಘಟಕದಲ್ಲಿ ಸಂಶೋಧಿಸಿ ಅಭಿವೃದ್ಧಿಪಡಿಸಿದೆ. ಅಕ್ವಾಗ್ರಿ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ IFFCO ದ ಸಹವರ್ತಿಯಾಗಿದೆ. ಈ ಘಟಕವು DSIR ನಿಂದ ಗುರುತಿಸಲ್ಪಟ್ಟಿದೆ ಮತ್ತು ಭಾರತೀಯ ವಿಜ್ಞಾನ ವ್ಯವಸ್ಥೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ಈ ನಗರ ಉತ್ಪನ್ನಗಳ ತಯಾರಿಕೆ ಮತ್ತು ಅವುಗಳ ಮಾರ್ಕೆಟಿಂಗ್ ಅನ್ನು ಅದರ ಅಂಗಸಂಸ್ಥೆಯಾದ ಅಕ್ವಾಗ್ರಿ ಗ್ರೀನ್‌ಟೆಕ್ ಪ್ರೈವೇಟ್ ಲಿಮಿಟೆಡ್ ಮೂಲಕ ಮಾಡಲಾಗುತ್ತದೆ.
ತಮ್ಮ ಸಸ್ಯಗಳ ಕುರಿತು ಕಾಳಜಿ ವಹಿಸುವ ನಗರ ಉದ್ಯಾನ ಬಳಕೆದಾರರಿಗೆ ಈ ಉತ್ಪನ್ನಗಳು ಪರಿಣಾಮಕಾರಿಯಾಗಿ ಸುಲಭವಾದ ಪರಿಹಾರಗಳನ್ನು ನೀಡುತ್ತವೆ. ಪ್ರಾರಂಭದಲ್ಲಿ ಇದು ಏಳು ಪರಿಸರ ಸ್ನೇಹಿ ಉತ್ಪನ್ನಗಳನ್ನು ಒಳಗೊಂಡಿರುತ್ತದೆ ಮತ್ತು ಶೀಘ್ರದಲ್ಲೇ ಇದಕ್ಕೆ ಇನ್ನಷ್ಟು ಉತ್ಪನ್ನಗಳನ್ನು ಸೇರಿಸಲಾಗುವುದು. ಉತ್ಪನ್ನಗಳ ಹೆಚ್ಚಿನ ವಿವರಗಳನ್ನು www.aquagt.in ನಲ್ಲಿ ಕಾಣಬಹುದು.ಆ ಉತ್ಪನ್ನಗಳೆಂದರೆ, ನ್ಯೂಟ್ರಿ ರಿಚ್ - ಕಡಲಕಳೆ ಫೋರ್ಟಿಫೈಡ್ ವರ್ಮಿಕಾಂಪೋಸ್ಟ್, ಪ್ರೊಟೆಕ್ಟ್ + - ಬೇವು ಮತ್ತು ಜೈವಿಕ ಕೀಟನಾಶಕ ಆಧಾರಿತ ಸಸ್ಯ ಸಂರಕ್ಷಣೆ, ಮ್ಯಾಜಿಕ್ ಮಣ್ಣು - ಎಲ್ಲಾ ಉದ್ದೇಶದ ಪಾಟಿಂಗ್ ಮಣ್ಣು, ಸೀ ಸೀಕ್ರೇಟ್ - ಬೆಳವಣಿಗೆ ಮತ್ತು ಸಸ್ಯ ಒತ್ತಡ ಸಹಿಷ್ಣುತೆ ವರ್ಧಕ, ಹಸಿರು ಆಹಾರ - ತ್ವರಿತ ಸಸ್ಯ ಆಹಾರ, ಲೈಫ್ ಪ್ರೊ - ಕಟ್ ಫ್ಲವರ್ ಲೈಫ್ ಎಕ್ಸ್‌ಟೆಂಡರ್, ಬೊಕಾಶಿ - ಕಿಚನ್ ವೇಸ್ಟ್ ಡಿಕಂಪೋಸರ್, ಮುಂತಾದವುಗಳು.
IFFCO ನ MDಯಾದ ಡಾ. U S ಅವಸ್ಥಿಯವರು, ಈ ಬೆಳವಣಿಗೆಯ ಕುರಿತು, "52 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ರೈತರ ಅಗತ್ಯಗಳನ್ನು ಪೂರೈಸಿದ ನಂತರ, ಈಗ ನಮ್ಮ ಸಹವರ್ತಿಯಾದ AquaGT , ಅವರ ತೋಟಗಾರಿಕೆಯ ಅಗತ್ಯಗಳನ್ನು ಪೂರೈಸುವ ಮೂಲಕ ನಗರ ಗ್ರಾಹಕರೊಂದಿಗೆ ಸಂಪರ್ಕವನ್ನು ನಿರ್ಮಿಸುತ್ತಿದೆ." ಇದು ನಗರ ಪ್ರದೇಶಗಳಲ್ಲಿ IFFCO ದ ಗೋ ಗ್ರೀನ್ ಡ್ರೈವ್ ಅನ್ನು ವರ್ಧಿಸುತ್ತದೆ. ನಗರ ತೋಟಗಾರಿಕೆ ಉತ್ಪನ್ನಗಳ ಈ ಹೊಸ ಆವಿಷ್ಕಾರದಿಂದ ನಾವು ಸಂತೋಷ ಮತ್ತು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.ನಗರದ ಜನಸಂಖ್ಯೆಯಲ್ಲಿ ತೋಟಗಾರಿಕೆಯತ್ತ ಆಸಕ್ತಿ ಹೆಚ್ಚುತ್ತಿದೆ ಮತ್ತು . ತಮ್ಮ ತೋಟಗಳಿಗೆ ಸಿದ್ಧ ಮಣ್ಣಿನ ಪೋಷಕಾಂಶಗಳ ಒಳಹರಿವು ವಿಷಯದಲ್ಲಿ, ಅವರು ವಿಶ್ವಾಸಾರ್ಹ ಮತ್ತು ಪ್ರಮಾಣಿಕತೆಯನ್ನು ಹುಡುಕುತ್ತಿದ್ದಾರೆ."
ಭಾರತದಲ್ಲಿ ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಗಾತ್ರವು ಸುಮಾರು 10,000 ಕೋಟಿ ರೂ.ಆಗಿದ್ದು 50% ರಷ್ಟು ಪಾಲನ್ನು ಸಸ್ಯಗಳ ಮೇಲೆ ಕೊಡಲಾಗಿದೆ ಎಂದು ಅಂದಾಜಿಸಲಾಗಿದೆ. ಸಸ್ಯ ಆರೈಕೆ ಉತ್ಪನ್ನಗಳು ಅಂದಾಜು. ಒಟ್ಟು ಮಾರುಕಟ್ಟೆಯ 15%, ಉಳಿದವುಗಳನ್ನು ಪಾಟ್ಸ್, ಟೂಲ್ಸ್ ಮತ್ತು ಗಾರ್ಡನ್ ಡೆಕೋರ್ ನಡುವೆ ವಿಂಗಡಿಸಲಾಗಿದೆ
ಈ ಹೊಸ ಉತ್ಪನ್ನಗಳು ಆನ್‌ಲೈನ್‌ನಲ್ಲಿ IFFCO ಹೊಸದಾಗಿ ಪ್ರಾರಂಭಿಸಲಾದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್, www.iffcobazar.in ಮತ್ತು NCR ಆಯ್ದ ನರ್ಸರಿಗಳಲ್ಲಿ ಲಭ್ಯವಿದೆ. ನಾವು ದೇಶಾದ್ಯಂತ ವಿವಿಧ ಚಾನೆಲ್‌ಗಳ ಮೂಲಕ ಲಭ್ಯತೆಯ ಕೇಂದ್ರಗಳನ್ನು ವಿಸ್ತರಿಸಿದ್ದೇವೆ. ಕಂಪನಿಯು ತಾಂತ್ರಿಕ ಮತ್ತು ವಿತರಣಾ ಸಹಯೋಗಗಳಿಗೆ ಮುಕ್ತವಾಗಿದೆ. ಕಾಲಾನಂತರದಲ್ಲಿ ನಾವು ಅಂತಿಮ ಬಳಕೆದಾರರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಹೆಚ್ಚು ವಿಶೇಷ ಉತ್ಪನ್ನಗಳು ಮತ್ತು ತೋಟಗಾರಿಕೆ ಸಾಧನಗಳನ್ನು ಅಭಿವೃದ್ಧಿಪಡಿಸುವುದನ್ನು ಮತ್ತು ಪರಿಚಯಿಸುವುದನ್ನು ಮುಂದುವರಿಸುತ್ತೇವೆ ಎಂದು ಆಕ್ವಾ ಅಗ್ರಿ ಎಂಡಿ ಶ್ರೀ ಅಭಿರಾಮ್ ಸೇಠ್ ಹೇಳಿದರು.
ತಾಂತ್ರಿಕ ಮಾಹಿತಿಗಾಗಿ
ಸಂಪರ್ಕಿಸಿ +91-96678-98069,
ಇಮೇಲ್: info@aquagt.in
ನೀಡಿದವರು:
ಮಾರ್ಕೆಟಿಂಗ್ ಮತ್ತು ಸಂವಹನ
ಅಕ್ವಾ ಜಿಟಿ