
ಭಾರತದಲ್ಲಿ ಸಹಕಾರಿ ಚಳುವಳಿಯ ವಿಜೇತರನ್ನು ಗುರುತಿಸಲು ಮತ್ತು ಆಚರಿಸಲು, ಐಎಫ್ಎಫ್ ಸಿಒ(IFFCO) 1982 – 83 ಮತ್ತು 1993-94ರಲ್ಲಿ ಕ್ರಮವಾಗಿ ಪ್ರತಿಷ್ಠಿತ ' ಸಹಕಾರಿ ರತ್ನ’ ಮತ್ತು ‘ಸಹಕಾರಿ ಬಂಧು’ ಎಂಬ ಪ್ರಶಸ್ತಿಗಳನ್ನು ನೀಡಲಾಗುತ್ತವೆ. ಸಿದ್ಧಾಂತಗಳನ್ನು ಪ್ರಚುರ ಪಡಿಸುವಲ್ಲಿ ಮತ್ತು ಸಹಕಾರಿ ಚಳುವಳಿಯನ್ನು ಬಲಪಡಿಸುವಲ್ಲಿ ತಮ್ಮ ಅಮೋಘ ಕೊಡುಗೆಗಳನ್ನು ನೀಡಿದ ಸಹಕಾರಿ ಸಹೋದ್ಯೋಗಿಗಳನ್ನು ಇಲ್ಲಿ ಗೌರವಿಸಲಾಗುತ್ತದೆ.
ಈ ಪ್ರಶಸ್ತಿಯು, ಪ್ರಮಾಣ ಪತ್ರದೊಂದಿಗೆ 11 ಲಕ್ಷ ಮೊತ್ತದ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ. ದೇಶದಲ್ಲಿ ಪ್ರತಿ ವರ್ಷ ನವೆಂಬರ್ 14 ರಿಂದ 20ರ ವರೆಗೆ ಐಎಫ್ಎಫ್ ಸಿಒ(IFFCO)ದಿಂದ ಆಯೋಜಿಸಲಾಗುವ ಸಹಕಾರಿ ಸಪ್ತಾಹದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.
ರಾಜ್ಯ ಸಹಕಾರಿ ಸಂಘಗಳು ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಮತ್ತು ಐಎಫ್ಎಫ್ ಸಿಒ(IFFCO)ನ ನಿರ್ದೇಶಕ ಮಂಡಲಿಯವರಿಂದ ಶಿಫಾರಸುಗಳನ್ನು ಸ್ವೀಕರಿಸಲಾಗುತ್ತದೆ. ಶಿಫಾರಸುಗಳನ್ನು ಪರಿಶೀಲಿಸಲು ಮತ್ತು ಪ್ರಶಸ್ತಿ ವಿಜೀತರ ಆಯ್ಕೆಯ ಶಿಫಾರಸನ್ನು ನಿರ್ದೇಶಕ ಮಂಡಲಿಗೆ ಸಲ್ಲಿಸಲು ಉಪ ನಿರ್ದೇಶಕ ಮಂಡಲಿಯನ್ನು ರಚಿಸಲಾಗಿರುತ್ತದೆ.
ಸ್ಥಾಪನೆಯಾದಾಗಿನಿಂದ ಸುಮಾರು 35 ಅತ್ಯುತ್ತಮ ಸಹಕಾರಿ ಸಹೊದ್ಯೋಗಿಗಳು ‘ಸಹಕಾರಿ ರತ್ನ’ ಪ್ರಶಸ್ತಿಯನ್ನು ಮತ್ತು 26 ಸಹಕಾರಿ ಸಹೋದ್ಯೀಗಿಗಳು ಪ್ರತಿಷ್ಠಿತ ‘ಸಹಕಾರಿ ಬಂಧು’ ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ.
ಭಾರತದ ಮೊದಲ ಪ್ರಧಾನಮಂತ್ರಿಯಾದ ಜವಾಹರಲಾಲ ನೆಹರು ಅವರು ಪ್ರಚುರಪಡಿಸಿದ, ಸಹಕಾರಿ ವಿಚಾರಗಳನ್ನು ಸ್ಮರಿಸಲು ಮತ್ತು ಭಾರತೀಯ ಸಾಂಸ್ಕೃತಿಕ ನೀತಿಯ ಸಮಗ್ರ ಬೆಳವಣಿಗೆಗಳನ್ನು ಉತ್ತೇಜಿಸಲು, 1983ರಿಂದ ಐಎಫ್ಎಫ್ ಸಿಒ(IFFCO) ಸಂಸ್ಥೆಯು ಜವಾಹರಲಾಲ ನೆಹರು ಐಎಫ್ಎಫ್ ಸಿಒ(IFFCO) ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ.

ಜವಾಹರಲಾಲ್ ನೆಹರು ಅವರ ಸ್ಮರಣಾರ್ಥವಾಗಿ ಪ್ರಾರಂಭವಾಯಿತು
ಜವಾಹರಲಾಲ್ ನೆಹರು ಸ್ಮಾರಕ IFFCO ಉಪನ್ಯಾಸವನ್ನು ಸಾಮಾನ್ಯವಾಗಿ ಸಹಕಾರಿ ಸಪ್ತಾಹದ ಸಮಯದಲ್ಲಿ ಅಥವಾ ಅದರ ಆಸುಪಾಸಿನಲ್ಲಿ ಆಯೋಜಿಸಲಾಗುತ್ತದೆ, ಇದನ್ನು ಪ್ರತಿ ವರ್ಷದ ನವೆಂಬರ್ 14-20 ರ ನಡುವೆ ಆಚರಿಸಲಾಗುತ್ತದೆ.

ಪಂ. ನೆಹರೂ ಅವರು ರಾಷ್ಟ್ರವನ್ನು ಕಟ್ಟುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಶಕ್ತಿಯ ಬಗ್ಗೆ ತೀವ್ರ ನಂಬಿಕೆ ಹೊಂದಿದ್ದರು. ಸಹಕಾರಿ ಸಂಘಗಳ ಬಲ ಮತ್ತು ಸಮಾಜದ ವಿವಿಧ ವಿಭಾಗಗಳು ಮತ್ತು ಆರ್ಥಿಕತೆಯ ಉನ್ನತಿಯಲ್ಲಿ ಅವು ವಹಿಸುವ ವೈವಿಧ್ಯಮಯ ಪಾತ್ರದ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವುದು ಈ ಉಪನ್ಯಾಸದ ಹಿಂದಿನ ಉದ್ದೇಶವಾಗಿದೆ.
ಅದರ ಪ್ರಾರಂಭದಿಂದಲೂ, ಡಾ. ಡೆಸ್ಮಂಡ್ ಎಂ. ಟುಟು, ಡಾ. ಪಿ.ಜೆ. ಕುರಿಯನ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ದೇಶದ ಕೆಲವು ಪ್ರಭಾವಿ ವ್ಯಕ್ತಿಗಳು ಈ ವಾರ್ಷಿಕ ಕಾರ್ಯಕ್ರಮವನ್ನು ನೀಡಿದ್ದಾರೆ.