
ಇಂದು ನಡೆದ ಚುನಾವಣೆಯಲ್ಲಿ ಸಂಘಾನಿಯವರನ್ನು IFFCO ದ17ನೇ ಕಾರ್ಯದರ್ಶಿಗಳಾಗಿ ಮಂಡಳಿಯವರು ಆಯ್ಕೆ ಮಾಡಿರುತ್ತಾರೆ.
ಹೊಸದಿಲ್ಲಿ, ಜನವರಿ 19, 2022: ವಿಶ್ವದ ಪ್ರಥಮ ಮತ್ತು ಅತಿದೊಡ್ಡ ಸಹಕಾರಿ ಸಂಸ್ಥೆಗಳಲ್ಲೊಂದಾದ, ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯ (IFFCO) ಅಧ್ಯಕ್ಷರ ಚುನಾವಣೆಯಲ್ಲಿ ಇಂದು ಶ್ರೀ ದಿಲೀಪ್ ಸಂಘಾನಿ ಅವರನ್ನು IFFCO ನ 17 ನೇ ಅಧ್ಯಕ್ಷರಾಗಿ ಆಯ್ಕೆ ಮಾಡಿದರು. 2021 ರ ಅಕ್ಟೋಬರ್ 11 ರಂದು ಈಗಿನ ಅಧ್ಯಕ್ಷರಾದ ಶ್ರೀ ಬಲ್ವಿಂದರ್ ಸಿಂಗ್ ನಕೈ ಅವರ ನಿಧನದ ಕಾರಣದಿಂದ ಈ ಚುನಾವಣೆಗಳನ್ನು ನಡೆಸಲಾಗಿತ್ತು. IFFCO ದ ಚುನಾಯಿತ ನಿರ್ದೇಶಕರ ಮಂಡಳಿಯು ಇಂದು IFFCO ನ 17 ನೇ ಅಧ್ಯಕ್ಷರಾಗಿ ಶ್ರೀ ದಿಲೀಪ್ ಸಂಘಾನಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಅವರು ಈ ಹಿಂದೆ IFFCO ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
IFFCO, ರೈತರು ಮತ್ತು ಸಹಕಾರಿ ಸಂಸ್ಥೆಗಳಿಗೆ ಬದ್ಧವಾಗಿದೆ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರ “ಸಹಕಾರ್ ಸೇ ಸಮೃದ್ಧಿ” ಯ ಯೋಜನೆಯಡಿಯಲ್ಲಿ ರೈತರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಶ್ರೀ. ಸಂಫಾನಿಯವರು ತಮ್ಮ ಚುನಾವಣೆಯಲ್ಲಿ ಆಯ್ಕೆಯಾದ ಕುರಿತು ಹೇಳಿದರು.
IFFCO ನ MD ಆದ ಡಾ ಅವಸ್ಥಿ ಯವರು IFFCO ನಲ್ಲಿ ಹೀಗೆ ಹೇಳಿದರು; ರೈತರ ಆದಾಯವನ್ನು ದ್ವಿಗುಣಗೊಳಿಸುವ ಕನಸನ್ನು ನನಸಾಗಿಸಲು , ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ಯೋಜನೆಗಳಾದ ಆತ್ಮನಿರ್ಭರ್ ಕೃಷಿ ಮತ್ತು ಆತ್ಮನಿರ್ಭರ ಭಾರತ್‌ನ್ನು ಸಮನ್ವಯವಾಗಿ ಕಾರ್ಯನಿರ್ವಹಿಸುವದನ್ನು ನಾವು ಮುಂದುವರಿಸುತ್ತೇವೆ.
ಶ್ರೀ ದಿಲೀಪ್ ಭಾಯಿ ಸಂಘಾನಿ ಅವರು ಗುಜರಾತ್‌ನ ಹಿರಿಯ ಸಹಕಾರಿಯೂ ಮತ್ತು ಗುಜರಾತ್ ರಾಜ್ಯ ಸಹಕಾರ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ (GUJCOMASOL) ನ ಅಧ್ಯಕ್ಷರೂ ಆಗಿದ್ದು, 2017 ರಿಂದ ಈ ಹುದ್ದೆಯನ್ನು ಹೊಂದಿದ್ದಾರೆ. ಅವರು ಗುಜರಾತ್ ಸರ್ಕಾರದ ಸಚಿವಾಲಯದಲ್ಲಿ ಕೃಷಿ, ಸಹಕಾರ ಪ್ರಾಣಿಗಳ ಪಾಲನೆ,ಮೀನುಗಾರಿಕೆ, ಹಸು ಸಾಕಣೆ, ಜೈಲು, ಅಬಕಾರಿ ಕಾನೂನು ಮತ್ತು ನ್ಯಾಯ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವರಾಗಿದ್ದರು. ಅವರು 2019 ರಲ್ಲಿ IFFCO ನ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2021 ರಲ್ಲಿ ಐತಿಹಾಸಿಕ ಹೆಜ್ಜೆಯಾಗಿ ,ಭಾರತದಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ಸಹಕಾರಿ ಒಕ್ಕೂಟದ (NCUI) ಅಧ್ಯಕ್ಷ ಸ್ಥಾನಕ್ಕೆ ಶ್ರೀ ದಿಲೀಪ್ ಸಂಘಾನಿ ಅವರು ಚುನಾಯಿತರಾದರು.
IFFCO ತನ್ನ ಪ್ರಾರಂಭದಿಂದಲೂ ಭಾರತದ ರೈತರ ಕಲ್ಯಾಣಕ್ಕಾಗಿ ಯಾವಾಗಲೂ ಕೆಲಸ ಮಾಡುತ್ತಿದೆ. 70 ರ ದಶಕದ ಹಸಿರು ಕ್ರಾಂತಿ, 2000 ರ ದಶಕದಲ್ಲಿ ಗ್ರಾಮೀಣ ಮೊಬೈಲ್ ಟೆಲಿಫೋನಿನಿಂದ ತನ್ನ ಡಿಜಿಟಲ್ ಉಪಕ್ರಮಗಳ ಮೂಲಕ ಭಾರತೀಯ ರೈತರ ಅಂಗೈಗೆ ಸಮಕಾಲೀನ ತಂತ್ರಜ್ಞಾನ ಮತ್ತು ಸೇವೆಗಳನ್ನು ತರುವವರೆಗೆ ದಶಕಗಳ ಸೇವೆಯ ನಂತರ ಅವರು ಹೊಂದಿದ ನಂಬಿಕೆಯಿಂದಾಗಿ IFFCO ಈ ಸ್ಥಾನವನ್ನು ಸಾಧಿಸಲು ಸಾಧ್ಯವಾಗಿದೆ. ನ್ಯಾನೊತಂತ್ರಜ್ಞಾನ ಆಧಾರಿತ ರಸಗೊಬ್ಬರವಾದ IFFCO ನ್ಯಾನೊ ಯೂರಿಯಾ ಲಿಕ್ವಿಡ್ ಅನ್ನು ಯಶಸ್ವಿಯಾಗಿ ಪರಿಚಯಿಸಿದ ವಿಶ್ವದ ಮೊದಲ ರಸಗೊಬ್ಬರ ತಯಾರಕ IFFCO ಆಗಿದೆ. IFFCO ನ ನಾಯಕತ್ವವು ಪ್ರವರ್ತಕ ಕ್ರಮಗಳು ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಕ್ರಮಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.