BEWARE OF FRAUDSTERS: WE HAVE NOT INVITED ANY REQUESTS FOR DEALERSHIP/FRANCHISE. DO NOT TRUST ANYONE OFFERING SUCH A FACILITY AND SEEKING MONEY IN IFFCO’S NAME.

Listening voice...


ಡಾಕ್ಟರ್ ಗ್ರೀನ್ (ಎಲೆ ಮತ್ತು ಕಾಂಡದ ಮೇಲೆ ಆಕ್ರಮಣಕಾರಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಕಾಯಿಲೆಯಿಂದ ನೈಸರ್ಗಿಕ ರಕ್ಷಣೆ - 100% ನೀರಿನಲ್ಲಿ ಕರಗುತ್ತದೆ)
ಡಾಕ್ಟರ್ ಗ್ರೀನ್ ನ್ನು ಸೂಕ್ಷ್ಮ ಶಿಲೀಂಧ್ರ, ಎಲೆ/ಹಣ್ಣಿನ ಚುಕ್ಕೆ, ಮತ್ತು ಮೊಸಾಯಿಕ್ ವೈರಸ್ ಮುಂತಾದ ಎಲೆಗಳು ಮತ್ತು ಕಾಂಡಗಳ ಮೇಲೆ ದಾಳಿ ಮಾಡುವ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಸಸ್ಯಗಳನ್ನು ರಕ್ಷಿಸಲು ಬಳಸಲಾಗುತ್ತದೆ. ಇದು ನೈಸರ್ಗಿಕ ಮತ್ತು ಪ್ರಯೋಜನಕಾರಿ ಶಿಲೀಂಧ್ರ-ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಸೂಕ್ಷ್ಮಜೀವಿಗಳಿಂದ ಸಸ್ಯಗಳನ್ನು ಸಮೃದ್ಧಗೊಳಿಸುವುದಲ್ಲದೇ ಸಸ್ಯಗಳಿಗೆ ಆರೋಗ್ಯಕರ ಮತ್ತು ಹೆಚ್ಚು ಉತ್ಪಾದಕ ಶಕ್ತಿಯನ್ನು ಒದಗಿಸುಸತ್ತದೆ. ಇದು ಸಾವಯವ ಮತ್ತು ಪರಿಸರ ಸ್ನೇಹಿ ಉತ್ಪನ್ನವಾಗಿದ್ದು, ಇದರ ನಿಯಮಿತ ಬಳಕೆಯು ಸಸ್ಯಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ ಮುಕ್ತವಾಗಿರಲು ಸಹಾಯ ಮಾಡುತ್ತದೆ.
ಸಂಯೋಜನೆ:
- ನೈಸರ್ಗಿಕ ಸೂಕ್ಷ್ಮಜೀವಿಗಳ ಸಹಾಯಕ, ಜಡ ವಾಹಕ ವಸ್ತು, ಇತರವುಗಳು
ಪ್ರಮುಖ ಉಪಯೋಗಗಳು
- ಸೂಕ್ಷ್ಮ ಶಿಲೀಂಧ್ರ, ಎಲೆ/ಹಣ್ಣಿನ ಮೇಲಿನ ಚುಕ್ಕೆ, ಮೊಸಾಯಿಕ್ ವೈರಸ್ ಇತ್ಯಾದಿಗಳಂತಹ ಎಲ್ಲಾ ರೀತಿಯ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸಸ್ಯ ರೋಗಗಳಿಂದ ನೈಸರ್ಗಿಕ ಜೈವಿಕ ರಕ್ಷಣೆ.
- 100% ನೀರಿನಲ್ಲಿ ಕರಗುತ್ತದೆ
- ಯಾವುದೇ ಸಾವಯವ/ಅಜೈವಿಕ ಮಣ್ಣು, ಗೊಬ್ಬರ ಅಥವಾ ರಸಗೊಬ್ಬರದ ಜೊತೆಗೆ ಬಳಸಬಹುದು
- ಎರೆಹುಳುಗಳು ಮತ್ತು ಇತರ ಪ್ರಯೋಜನಕಾರಿ ಸೂಕ್ಷ್ಮಜೀವಿಗಳಿಗೆ ಸುರಕ್ಷಿತ
- ಒಳಾಂಗಣ/ಹೊರಾಂಗಣ ಸಸ್ಯಗಳು, ಹೂಗಳು, ಅಡುಗೆಮನೆಯ ತೋಟ, ಮರಗಳು, ಹುಲ್ಲುಹಾಸುಗಳು ಇತ್ಯಾದಿಗಳಿಗೆ ಸೂಕ್ತವಾಗಿದೆ
ಹೇಗೆ ಉಪಯೋಗಿಸಬೇಕು
- 5ml ಅನ್ನು 1 ಲೀಟರ್ ನೀರಿನಲ್ಲಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
- ಮಿಶ್ರಣಮಾಡಿದ ಮಿಶ್ರಣವನ್ನು ಸಸ್ಯದ ಮೇಲೆ ಏಕರೂಪವಾಗಿ ಸಿಂಪಡಿಸಿ
- ಉತ್ತಮ ಫಲಿತಾಂಶಗಳಿಗಾಗಿ ವಾರಕ್ಕೊಮ್ಮೆ ಪುನರಾವರ್ತಿಸಿ
- ವಿಷತ್ವವನ್ನು ತಪ್ಪಿಸಲು ಮುಂಜಾನೆ ಅಥವಾ ತಡ ಸಂಜೆಯಲ್ಲಿ ಬಳಸಿ
- ಶಿಥೀಲ ಮತ್ತು ಒಣ ಸ್ಥಳದಲ್ಲಿ ಮಕ್ಕಳ ಕೈಗೆಟುಕದಂತೆ ಇರಿಸಿ