


ಆಸಿಟೋಬ್ಯಾಕ್ಟರ್
ಇದು ಆಸಿಟೋಬ್ಯಾಕ್ಟರ್ ಬ್ಯಾಕ್ಟೀರಿಯಾವನ್ನು ಒಳಗೊಂಡಿರು ಜೈವಿಕ ಗೊಬ್ಬರವಾಗಿದ್ದು, ಸಸ್ಯದ ಬೇರುಗಳಲ್ಲಿ ಪ್ರಸರಣಗೊಳ್ಳುವುದು ಮತ್ತು ವಾಯುಮಂಡಲದ ಸಾರಜನಕವನ್ನು ಸರಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮಣ್ಣನ್ನು ಜೈವಿಕವಾಗಿ ಸಕ್ರೀಯಗೊಳಿಸುತ್ತದೆ ಮತ್ತು ಸಸ್ಯದ ಬೆಳವಣಿಗೆಗೆ ಉತ್ತೇಜಿತವಾಗಿರುವುದರಿಂದ ವಿಶೇಷವಾಗಿ ಇದು ಕಬ್ಬಿನ ಬೆಳೆಗೆ ಉಪಯುಕ್ತವಾಗಿದೆ.
ತಾಂತ್ರಿಕ ವಿಶೇಷಣಗಳು
ಐಎಫ್ಎಫ್ ಸಿಒ ದ ಆಸಿಟೋಬ್ಯಾಕ್ಟರ್ ನ ವಿಶೇಷಣಗಳು
100% | ಆಸಿಟೋಬ್ಯಾಕ್ಟರ್ ಬ್ಯಾಕ್ಟೇರಿಯಾ |
ಪ್ರಮುಖ ಅಂಶಗಳು
- ಆಸಿಟೋಬ್ಯಾಕ್ಟರ್ ಬ್ಯಾಕ್ಟೇರಿಯಾ ಸಂಸ್ಕರಣೆಯನ್ನು ಹೊಂದಿದೆ
- ಪರಿಸರ- ಸ್ನೇಹಿ
- ವಾಯುಮಂಡಲದಲ್ಲಿನ ಸಾರಜನಕ ಅಂಶವನ್ನು ಸ್ಥಿರಗೊಳಿಸುತ್ತದೆ
ಪ್ರಮುಖ ಉಪಯೋಗಗಳು
- ಕಬ್ಬಿನ ಬೆಳೆ ಮತ್ತು ಬೀಟ್ ಸಸ್ಯಗಳಿಗೆ ಉಪಯುಕ್ತವಾಗಿದೆ
- ಮಣ್ಣಿನ ಫಲವತ್ತತೆಯನ್ನು ಉತ್ತಮಗೊಳಿಸುತ್ತದೆ.
- ಬೆಳೆಯ ಇಳುವರಿಯನ್ನು ಹೆಚ್ಚಿಸುತ್ತದೆ.


ರಸಗೊಬ್ಬರವನ್ನು ಸ್ಥಳ, ಪ್ರಮಾಣ ಮತ್ತು ಬೆಳೆಯ ಚಕ್ರದ ಸಮಯಕ್ಕನುಗುಣವಾಗಿ ಬಳಸಬೇಕು. ಜೈವಿಕ ಗೊಬ್ಬರವನ್ನು ಬೀಜ ಸಂಸ್ಕರಣೆ, ಮಣ್ಣು ಸಂಸ್ಕರಣೆ ಅಥವಾ ಹನಿ ನೀರಾವರಿ ವಿಧಾನದ ಮೂಲಕ ಬಳಸಬಹುದು.


ಬೀಜ ಸಂಸ್ಕರಣೆ: 1 ಲೀಟರ್ ಸಾರಜನಕಯುಕ್ತ ಜೈವಿಕ ಗೊಬ್ಬರವನ್ನು 100 ಲೀಟರ್ ನೀರಿಗೆ ಬೆರಸಬೇಕು ಮತ್ತು ಕಬ್ಬಿನ ತುಂಡುಗಳನ್ನು 20 ನಿಮಿಷ ಆ ದ್ರಾವಣದಲ್ಲಿ ಇರಿಸಬೇಕು. ಈ ರೀತಿಯಾಗಿ ಸ೦ಸ್ಕರಿಸಿದ ಬೀಜವನ್ನು ಆದಷ್ಟು ಬೇಗನೆ ಬಿತ್ತನೆ ಮಾಡಬೇಕು.
