


ಬೇವು ಲೇಪಿತ ಯೂರಿಯಾ (N)
-
ಯೂರಿಯಾ ಇದು ಸಾರಜನಕದ ಮೂಲವಾಗಿದ್ದು, ಬೆಳೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇದು ಪ್ರಮುಖವಾದ ಪೋಷಕಾಂಶವಾಗಿದೆ. ಹೆಚ್ಚಿನ N ಅಂಶ (46%N) ನ್ನು ಹೊಂದಿರುವುದರಿಂದ ಯೂರಿಯಾವು, ದೇಶದ ಪ್ರಮುಖವಾದ ಸಾರಜನಕ ಗೊಬ್ಬರವಾಗಿದೆ. ಇದು ಕೈಗಾರಿಕಾ ಅನ್ವಯಿಕೆಗಳನ್ನು ಪ್ಲಾಸ್ಟಿಕ್‌ಗಳ ಉತ್ಪಾದನೆ ಮತ್ತು ಜಾನುವಾರುಗಳಿಗೆ ಪೌಷ್ಟಿಕಾಂಶದ ಪೂರಕಗಳನ್ನೂ ಸಹ ಒದಗಿಸುತ್ತದೆ.
ಬೇವು ಲೇಪಿತ ಯೂರಿಯಾ (N) ಇದು ಬೇವಿನ ಎಣ್ಣೆ ಲೇಪಿತ ಯೂರಿಯಾ ಆಗಿದ್ದು, ವಿಶೇಷವಾಗಿ ಅಭಿವೃದ್ಧಿಪಡಿಸಿದ ಕೃಷಿ ಗೊಬ್ಬರವಾಗಿ ಬಳಸಲಾಗುತ್ತದೆ. ಬೇವಿನ ಲೇಪನವು ಯೂರಿಯಾದ ನೈಟ್ರೇಟಿಕರಣವನ್ನು ನಿಧಾನಗೊಳಿಸುವುದರ ಮೂಲಕ ಮಣ್ಣಿನಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅಂತರ್ಜಲ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
ಪ್ರಮುಖ ಪ್ರಯೋಜನಗಳು
ಸಸ್ಯಗಳಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ
ಸಸ್ಯಗಳಿಗೆ ಸಮರ್ಪಕವಾದ ಸಾರಜನಕ ಪೂರೈಕೆಯನ್ನು ಖಚಿತಪಡಿಸುತ್ತದೆ
ಇಳುವರಿಯನ್ನು ಹೆಚ್ಚಿಸುತ್ತದೆ
ಪೋಷಕಾಂಶಗಳ ಸಮೃದ್ಧ ಮೂಲ

ಬೇವು ಲೇಪಿತ ಯೂರಿಯಾ (N)ನ್ನು ಹೇಗೆ ಉಪಯೋಗಿಸಬೇಕು
ಯೂರಿಯಾವನ್ನು ಸ್ಥಳ, ಪ್ರಮಾಣ ಮತ್ತು ಬೆಳೆಯ ಚಕ್ರದ ಸಮಯಗಳಂತ ಅಂಶಗಳನ್ನು ಪರಿಗಣಿಸಿ ಮಣ್ಣಿಗೆ ಅನ್ವಯಿಸಬೇಕು.
ಯೂರಿಯಾವನ್ನು ಖಾಲಿಯಾದ ಮಣ್ಣಿನ ಮೇಲ್ಮೈಗೆ ಅನ್ವಯಿಸಿದರೆ, ಅಮೋನಿಯಂ ಕಾರ್ಬೋನೇಟ್‌ಗೆ ಕ್ಷಿಪ್ರ ಜಲವಿಚ್ಛೇದನೆಯ ಪರಿಣಾಮವಾಗಿ ಗಮನಾರ್ಹ ಪ್ರಮಾಣದ ಅಮೋನಿಯಾವನ್ನು ಕಳೆದುಕೊಳ್ಳಬಹುದು. ಇದನ್ನು ಬಿತ್ತನೆಯ ಸಮಯದಲ್ಲಿ ಮತ್ತು ನಿಂತಿರುವ ಬೆಳೆಗಳಲ್ಲಿ (ಟಾಪ್ ಡ್ರೆಸ್ಸಿಂಗ್) ಅನ್ವಯಿಸಬೇಕು. ಬಿತ್ತನೆಯ ಸಮಯದಲ್ಲಿ ಶಿಫಾರಸು ಮಾಡಿದ ಅಳತೆಯ ಅರ್ಧ ಭಾಗ ಮತ್ತು 30 ದಿನಗಳ ನಂತರ ಉಳಿದ ಅರ್ಧ ಭಾಗವನ್ನು 15 ದಿನಗಳ ಅಂತರದಲ್ಲಿ 2-3 ಸಮಾನ ಭಾಗಗಳಲ್ಲಿ ಅನ್ವಯಿಸಬೇಕು. ಈ ವಸ್ತುವನ್ನು ಹೆಚ್ಚಿನ ಪ್ರಮಾಣದಲ್ಲಿ ಬೀಜದೊಂದಿಗೆ ಅಥವಾ ತುಂಬಾ ಹತ್ತಿರದಲ್ಲಿ ಇರಿಸಿದರೆ. ಮಣ್ಣಿನಲ್ಲಿನ ಯೂರಿಯಾದ ಕ್ಷಿಪ್ರ ಜಲವಿಚ್ಛೇದನವು ಮೊಳಕೆಗೆ ಅಮೋನಿಯಾ ಹಾನಿಯು ಕಾರಣವಾಗಿತ್ತದೆ., ಬೀಜಕ್ಕೆ ಸಂಬಂಧಿಸಿದಂತೆ ಯೂರಿಯಾವನ್ನು ಸರಿಯಾಗಿ ಇಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
ಯೂರಿಯಾವನ್ನು (ರಾಜ್ಯದ ಸಾಮಾನ್ಯ ಶಿಫಾರಸುಗಳ ಪ್ರಕಾರ) ಬೆಳೆಗಳ ಅವಶ್ಯಕತೆ ಮತ್ತು ಮಣ್ಣಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಅನ್ವಯಿಸಬೇಕು